MON - SAT 10.00 am - 06.00 pm
CRUST Website Designers & Web Developers | PutturCRUST Website Designers & Web Developers | PutturCRUST Website Designers & Web Developers | Puttur
09.30 am - 07.00 pm
Main Road, Puttur, D.K. Dist 574201

Complete Guide for Karnataka PGCET Counselling

KEA-PGCET

Karnataka Examination Authority conducted Post Graduate Common Entrance Test (PGCET) recently for those who seeking admission for MBA, MCA, ME, M.Tech and M.Arch. courses. The counseling process will start once the PGCET result is declared. PGCET helps to get government quota seats in all professional colleges within Karnataka.

Here is the Complete Guide from CRUST Puttur. Please read full information! ಕ್ರಸ್ಟ್ ಒದಗಿಸುವ ಸಂಪೂರ್ಣ ಮಾರ್ಗದರ್ಶಿ ಇಲ್ಲಿದೆ. ದಯವಿಟ್ಟು ಪೂರ್ತಿ ಓದಿ!

KEA-PGCETHere is the complete picture of the documents verification for Karnataka PGCET and Option Entry Process [Note: there is no counseling process for PGCET. Only if the seats remained after all the rounds of option entry, the off-line counseling may be conducted.]

Karnataka PGCET Counselling Stages

Stage 1: PGCET Application Submission

KEA invites applications from eligible students those who aspires to obtain merit based government quota seats. Eligible students may register and complete application submission by making fees payment.

ಮೆರಿಟ್ ಆಧಾರಿತ ಸರ್ಕಾರಿ ಕೋಟಾ ಸೀಟುಗಳನ್ನು ಪಡೆಯಲು ಬಯಸುವ ಅರ್ಹ ವಿದ್ಯಾರ್ಥಿಗಳಿಂದ, ಕೆಇಎ ಅರ್ಜಿಗಳನ್ನು ಆಹ್ವಾನಿಸುತ್ತದೆ. ಅರ್ಹ ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳಬಹುದು ಮತ್ತು ಅರ್ಜಿ ಸಲ್ಲಿಕೆಯನ್ನು ಶುಲ್ಕವನ್ನು ಪಾವತಿಸುವ ಮೂಲಕ ಪೂರ್ಣಗೊಳಿಸಬಹುದು.

Stage 2: PGCET Admit Card Download

KEA will release PGCET Admit cards on it’s official website. Students have to download and take print out to enter examination hall. Students must follow all the terms and conditions as mentioned in Admit Card.

PGCET ಪ್ರವೇಶ ಕಾರ್ಡ್‌ಗಳನ್ನು KEA ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡುತ್ತದೆ. ಪರೀಕ್ಷಾ ಕೊಠಡಿಯನ್ನು ಪ್ರವೇಶಿಸಲು ವಿದ್ಯಾರ್ಥಿಗಳು ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳು ಪ್ರವೇಶ ಕಾರ್ಡ್‌ನಲ್ಲಿ ನಮೂದಿಸಿರುವ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಕಡ್ಡಾಯವಾಗಿ ಅನುಸರಿಸಬೇಕು.

Stage 3: PGCET Result Declaration

Government will release the PGCET ranks of all the eligible students. Students can check their PGCET Rank at https://karresults.nic.in. Once the PGCET Result is made available, KEA will Publishes the Document Verification Schedule.

ಸರ್ಕಾರವು ಎಲ್ಲಾ ಅರ್ಹ ವಿದ್ಯಾರ್ಥಿಗಳ PGCET ಶ್ರೇಣಿಗಳನ್ನು ಬಿಡುಗಡೆ ಮಾಡುತ್ತದೆ. ವಿದ್ಯಾರ್ಥಿಗಳು ತಮ್ಮ PGCET ಶ್ರೇಣಿಯನ್ನು https://karresults.nic.in ನಲ್ಲಿ ಪರಿಶೀಲಿಸಬಹುದು. PGCET ಫಲಿತಾಂಶವು ಲಭ್ಯವಾದ ನಂತರ, KEA ಡಾಕ್ಯುಮೆಂಟ್ ಪರಿಶೀಲನೆಗಾಗಿ ವೇಳಾಪಟ್ಟಿಯನ್ನು ಪ್ರಕಟಿಸುತ್ತದೆ.

Stage 4: Finding your Schedule for Document Verification

You required to attend document verification accordingly to your rank in KEA specified verification centres. You can do on highest rank’s schedule.

ನೀವು ದಾಖಲಾತಿ ಪರಿಶೀಲನೆಗೆ ನಿಮ್ಮ Rank ಆಧಾರದ ಮೇಲೆ ಕೆಇಎ ನಿಗದಿಪಡಿಸಿದ ಕೇಂದ್ರಗಳಲ್ಲಿ ಹಾಜರಾಗತಕ್ಕದ್ದು. ಪಿಜಿಸಿಇಟಿಯಲ್ಲಿ ಉತ್ತಮ Rank ಗಳಿಸಿದ ಯಾವುದೇ ವಿಷಯದ ಮೇಲೆ ದಾಖಲೆ ಪರಿಶೀಲನೆಗೆ ಹಾಜರಾಗಬಹುದು.

Stage 5:  Preparing Documents for Documents Verification

Student have to arrange all the relevant documents ready before the document verification. In case student is failed to produce the required documents for verification, he/she might get ineligible to participate in the counseling process.

ವಿದ್ಯಾರ್ಥಿಯು ದಾಖಲಾತಿ ಪರಿಶೀಲನೆಗೆ ಸಂಬಂಧಿಸಿದಂತೆ ಎಲ್ಲಾ ಪೂರಕ ದಾಖಲಾತಿಗಳನ್ನು ದಾಖಲೆ ಪರಿಶೀಲನೆಗೆ ಮುಂಚಿತವಾಗಿ ಸಿದ್ಧಪಡಿಸಿಟ್ಟುಕೊಳ್ಳಬೇಕು. ವಿದ್ಯಾರ್ಥಿಯು ಪರಿಶೀಲನೆಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಲು ವಿಫಲವಾದಲ್ಲಿ, ಅವನು/ಅವಳು ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನರ್ಹರಾಗಬಹುದು

List of Documents Required for PGCET

List of Documents to be arranged by student are / ವಿದ್ಯಾರ್ಥಿಯು ಸಿದ್ಧಪಡಿಸಿ ಇಟ್ಟುಕೊಳ್ಳಬೇಕಾದ ದಾಖಲಾತಿಗಳು:

The common documents are as follows. These documents checklist is prepared by CRUST, Puttur keeping in mind of the students those who have claimed Eligibility Clause A, B & H . Other students are requested to consult CRUST Educational Consultants Office, Puttur

ಸಾಮಾನ್ಯ ದಾಖಲಾತಿಗಳು ಈ ಕೆಳಗಿನಂತಿವೆ. ದಾಖಲಾತಿಗಳ ಚೆಕ್‍ಲಿಸ್ಟ್ ಅನ್ನು ಅರ್ಹತಾ ಖಂಡಿಕೆ ಎ, ಬಿ ಮತ್ತು ಹೆಚ್ ಯನ್ನು ಆಯ್ದುಕೊಂಡ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ತಯಾರಿಸಲಾಗಿದೆ. ಇತರ ವಿದ್ಯಾರ್ಥಿಗಳು ಪುತ್ತೂರು ಕ್ರಸ್ಟ್ ಕಚೇರಿಯಲ್ಲಿ ವಿಚಾರಿಸಬಹುದು.

    1. PGCET Application Copy
      ಪಿಜಿಸಿಇಟಿ ಅಪ್ಲಿಕೇಶನ್ ಪ್ರತಿ
    2. PGCET Application Fee Payment Receipt (If paid offline, KEA copy of bank challan)
      ಪಿಜಿಸಿಇಟಿ ಅರ್ಜಿ ಶುಲ್ಕ ಪಾವತಿ ಮಾಡಿದ ರಶೀದಿ (ಆಫ್‍ಲೈನ್ ಪಾವತಿಸಿದ್ದಲ್ಲಿ ಬ್ಯಾಂಕ್ ಚಲನ್ನಿನ ಕೆಇಎ ಪ್ರತಿ)
    3. PGCET Examination Admit Card/Hall Ticket in Original
      ಪಿಜಿಸಿಇಟಿ ಪರೀಕ್ಷೆಯ ಒರಿಜಿನಲ್ ಪ್ರವೇಶಪತ್ರ/ಹಾಲ್ ಟಿಕೆಟ್
    4. SSLC Mark Card in Original
      ಒರಿಜಿನಲ್ ಹತ್ತನೇ ತರಗತಿ ಅಂಕಪಟ್ಟಿ
    5. II PUC Mark Card in Original
      ದ್ವಿತೀಯ ಪಿಯುಸಿ ಒರಿಜಿನಲ್  ಅಂಕಪಟ್ಟಿ
    6. Degree – All Year/Semester’s (Or Eligible Course) Mark Cards in Original (In case Original Mark Card of any Semester is not issued, Internet Copy Should be Signed & Sealed by your Present College Principal)
      ಪದವಿಯ (ಅಥವಾ ಅರ್ಹತಾ ಪರೀಕ್ಷೆಯ) ಎಲ್ಲಾ ವರ್ಷ/ಸೆಮಿಸ್ಟರ್ ಗಳ ಒರಿಜಿನಲ್ ಅಂಕಪಟ್ಟಿ (ಒಂದು ವೇಳೆ ಯಾವುದೇ ಸೆಮಿಸ್ಟರ್ ಒರಿಜಿನಲ್ ಅಂಕಪಟ್ಟಿ ಲಭ್ಯವಾಗಿಲ್ಲದ್ದಲ್ಲಿ, ಇಂಟರ್ನೆಟ್‍ನಿಂದ ಪಡೆದ ಅಂಕಪಟ್ಟಿಯನ್ನು ಈಗಿನ ಕಾಲೇಜು ಪ್ರಾಂಶುಪಾಲರಿಂದ ದೃಢೀಕರಿಸಿಕೊಂಡಿರತಕ್ಕದ್ದು)
    7. Degree Convocation Certificate OR Provisional Degree Certificate (Course Completion certificate will not be accepted)
      ಪದವಿಯ ಕಾನ್ವೋಕೇಶನ್ ಪ್ರಮಾಣಪತ್ರ ಅಥವಾ ತಾತ್ಕಾಲಿಕ ಉತ್ತೀರ್ಣ ಪ್ರಮಾಣಪತ್ರ (ಕೋರ್ಸ್ ಪೂರ್ಣಗೊಂಡ ಪ್ರಮಾಣಪತ್ರವನ್ನು ಪರಿಗಣಿಸಲಾಗುವುದಿಲ್ಲ)
    8. If Claiming, Caste Certificate (For SC/ST/Cat-1 candidates only)
      ಜಾತಿ ಪ್ರಮಾಣಪತ್ರ (SC/ST/Cat-1 ಅಭ್ಯರ್ಥಿಗಳಿಗೆ ಮಾತ್ರ)
    9. If Claiming, Income & Caste Certificate (For 2A, 2B, 3A & 3B Candidates only)
      ಆದಾಯ & ಜಾತಿ ಪ್ರಮಾಣಪತ್ರ (2A, 2B, 3A & 3B ಅಭ್ಯರ್ಥಿಗಳಿಗೆ ಮಾತ್ರ)
    10. If Claiming, Income Certificate issued by Tahasildar (For SC/ST/Cat-1 Candidates & for GM Candidates only if Annual income is less than Rs.8 lakh)
      ತಹಶೀಲ್ದಾರರಿಂದ ಪಡೆದ ಆದಾಯ ಪ್ರಮಾಣಪತ್ರ (SC/ST/Cat-1 ಅಭ್ಯರ್ಥಿಗಳಿಗೆ; ಸಾಮಾನ್ಯ ವರ್ಗಕ್ಕೆ ವಾರ್ಷಿಕ ಆದಾಯ ರೂ.8 ಲಕ್ಷಕ್ಕಿಂತ ಕಡಿಮೆ ಇದ್ದಲ್ಲಿ ಮಾತ್ರ)
    11. Study Certificate of the Student (for the period of years studied in Karnataka as you have mentioned in your PGCET application) 
      ವಿದ್ಯಾರ್ಥಿಯ ವ್ಯಾಸಂಗ ಪ್ರಮಾಣ ಪತ್ರ (ಪಿಜಿಸಿಇಟಿ ಅರ್ಜಿಯಲ್ಲಿ ಎಷ್ಟು ವರ್ಷಗಳನ್ನು ಕರ್ನಾಟಕ ರಾಜ್ಯದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ತಿಳಿಸಿರುವಿರೋ ಅಷ್ಟು ವರ್ಷಕ್ಕೆ)
    12. 4-5 Passport Size Photographs of the Student
      4 ರಿಂದ 5 ಪಾಸ್‍ಪೋರ್ಟ್ ಅಳತೆಯ ವಿದ್ಯಾರ್ಥಿಯ ಭಾವಚಿತ್ರ
    13. Original Aadhaar Card
      ಆಧಾರ್ ಕಾರ್ಡು – ಒರಿಜಿನಲ್
    14. 2-3 SETS of Photocopies (Xerox) of All the Above Documents duly signed & sealed by the Gazetted Officer
      ಮೇಲಿನ ಎಲ್ಲಾ ದಾಖಲಾತಿಗಳ 2 ರಿಂದ 3 ಸೆಟ್ ನಕಲು ಪ್ರತಿಗಳಿಗೆ (ಜೆರಾಕ್ಸ್) ಗೆಜೆಟೆಡ್ ಅಧಿಕಾರಿಯಿಂದ ಸಹಿ & ಮೊಹರು ಪಡೆದುಕೊಂಡಿರಬೇಕು
    15. PGCET Result Copy / Mark List (Internet Copy) – (Optional)
      ಪಿಜಿಸಿಇಟಿ ಫಲಿತಾಂಶದ ಅಂಕಪಟ್ಟಿ (ಇಂಟರ್ನೆಟ್ ಪ್ರತಿ) – (Optional)

Stage 6: Wait for Your Schedule to Documents Verification & Upload

KEA will provide the detailed calendar for Document Verification based on the Rank in the PGCET. Students have to attend in person for document verification in KEA designated verification centres. You have to wait till your turn. For details consult CRUST Office, Puttur.

ಪಿಜಿಸಿಇಟಿಯ ರ‍್ಯಾಂಕ್ ಆಧಾರದಲ್ಲಿ ದಾಖಲಾತಿ ಪರಿಶೀಲನೆಗೆ ಕೆಇಎ ವಿವರವಾದ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ವಿದ್ಯಾರ್ಥಿಯು ಕೆಇಎ ನಿಗದಿಪಡಿಸಿದ ಕೇಂದ್ರಗಳಲ್ಲಿ ಖುದ್ದಾಗಿ ಹಾಜರಾಗತಕ್ಕದ್ದು. ಸಹಾಯಕ್ಕಾಗಿ ಪುತ್ತೂರು ಕ್ರಸ್ಟ್ ಕಚೇರಿಯನ್ನು ಸಂಪರ್ಕಿಸಬಹುದು.

Stage 7: Obtain Verification Slip

If document verification completed successfully, KEA issues Verification Slip to the student having a Secret Key code. This Secret Key is very important for the next process of choosing the course/colleges. Do not share this with friends/unwanted persons.

ದಾಖಲಾತಿ ಪರಿಶೀಲನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗೆ ಕೆಇಎಯು ಸೀಕ್ರೆಟ್ ಕೀ ಹೊಂದಿರುವ ವೆರಿಫಿಕೇಶನ್ ಸ್ಲಿಪ್ ಅನ್ನು ನೀಡುತ್ತದೆ. ಸೀಕ್ರೆಟ್ ಕೀಯು ಕೋರ್ಸು/ಕಾಲೇಜಿನ ಆಯ್ಕೆಯ ಮುಂದಿನ ಎಲ್ಲಾ ಪ್ರಕ್ರಿಯೆಗಳಲ್ಲಿ ಅತ್ಯಂತ ಪ್ರಾಮುಖ್ಯತೆ ಹೊಂದಿರುತ್ತದೆ. ಇದನ್ನು ಮಿತ್ರರೊಂದಿಗೆ / ಅನಗತ್ಯ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬಾರದು.


Note: For Assistance and Guidance in Option Entry Process, you can consult CRUST Office, Puttur
ಸೂ: ಆಪ್ಷನ್ ಎಂಟ್ರಿ ಪ್ರಕ್ರಿಯೆಯ ಸಹಾಯ ಹಾಗೂ ಸಲಹೆಗಳಿಗಾಗಿ ಕ್ರಸ್ಟ್ ಕಚೇರಿಯನ್ನು ಸಂಪರ್ಕಿಸಬಹುದು.

NEED CONSULTATION?

Stage 8: Karnataka PGCET Option Entry Process

(Option Entry Process: Only after Document Verification)

  1. Mock Round
  2. First Real Round
  3. Second Real Round

If Seats remained further rounds (Mop up rounds) as determined by KEA

Karnataka PGCET OPTION ENTRY PHASES —

1st Phase:
Mock Round: Student can check a trial Option Entry on this stage. But allotted college/course may not be confirmed to you.
ಅಣಕು ಹಂತ: ವಿದ್ಯಾರ್ಥಿಯು ಈ ಹಂತದಲ್ಲಿ ಯಾವ ಕಾಲೇಜು/ಕೋರ್ಸು ಲಭ್ಯವಾಗಬಹುದು ಎಂದು ಪರೀಕ್ಷಿಸಿಕೊಳ್ಳಬಹುದು; ಆದರೆ ಇದು ಖಚಿತ ಆಯ್ಕೆಯಾಗಲಾರದು.

2nd Phase:
Real Rounds: These are the serious and very careful rounds (So CRUST Educational Consultants doesn’t share views on social media. Requested to consult in person for personal consultation)
ನೈಜ ಹಂತಗಳು: ಮುಂದಿನ ಎಲ್ಲಾ ಹಂತಗಳು ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುವುದರಿಂದ ಅತ್ಯಂತ ಜಾಗರೂಕರಾಗಿ ಈ ಹಂತಗಳನ್ನು ಪೂರ್ಣಗೊಳಿಸಿಕೊಳ್ಳಬೇಕು (ಆದುದರಿಂದಾಗಿ ಕ್ರಸ್ಟ್ ಸಂಸ್ಥೆಯು ಈ ಹಂತದ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದಿಲ್ಲ, ಬದಲಿಗೆ ಕ್ರಸ್ಟ್ ಕಚೇರಿಗೆ ಭೇಟಿ ನೀಡಿ ವೈಯಕ್ತಿಕ ಸಲಹೆ ಪಡೆಯಲು ಸೂಚಿಸಲಾಗಿದೆ)

CRUST Educational Consultants Assist and Guide you through out the PGCET Counseling Process to get your dream course/college. Since you are shaping your Professional Career though PGCET, we recommend you to choose the best rated college accordingly your choice.

ನಿಮ್ಮ ಕನಸಿನ ಕೋರ್ಸು/ಕಾಲೇಜಿನ ಆಯ್ಕೆ ಮಾಡಿಕೊಳ್ಳುವ ಪಿಜಿಸಿಇಟಿಯ ಸಂಪೂರ್ಣ ಪ್ರಕ್ರಿಯೆಯಲ್ಲಿ ಕ್ರಸ್ಟ್ ಸಂಸ್ಥೆಯು ನಿಮ್ಮೊಂದಿಗೆ ಇದ್ದು ಸಹಕಾರ ಹಾಗೂ ಮಾರ್ಗದರ್ಶನ ನೀಡಲಿದೆ. ಪಿಜಿಸಿಇಟಿ ಮೂಲಕ ನಿಮ್ಮ ವೃತ್ತಿಪರ ವೃತ್ತಿಜೀವನಕ್ಕೆ ಮುನ್ನುಡಿಯಿಡುತ್ತಿರುವ ಈ ಹಂತದಲ್ಲಿ ನಿಮ್ಮ ಆಯ್ಕೆಯ ಉತ್ತಮ ಗುಣಮಟ್ಟದ ಕಾಲೇಜು ಆಯ್ಕೆಯಲ್ಲಿ ನಾವೂ ನೆರವಾಗಲಿದ್ದೇವೆ.

**************************************

Documents for Other Clauses (B & H)

  1. Eligibility Clause B
    1. All the Documents mentioned in serial number 1 to 10 and 12 to 15 for Clause A above.
      ಮೇಲೆ ಅರ್ಹತಾ ಖಂಡ ಎ ಯಲ್ಲಿ ನೀಡಲಾದ ದಾಖಲೆಗಳಲ್ಲಿ ಕ್ರಮ ಸಂಖ್ಯೆ 1 ರಿಂದ 10 ಮತ್ತು 12 ರಿಂದ 15 ರಲ್ಲಿ ತಿಳಿಸಿದ ಎಲ್ಲಾ ದಾಖಲೆಗಳು
    2. Student’s study certificate for study of Qualifying Education (Degree) in Karnataka.
      ಕರ್ನಾಟಕದಲ್ಲಿ ಅರ್ಹತಾ ಪರೀಕ್ಷೆಯನ್ನು (ಪದವಿ) ವ್ಯಾಸಂಗ ಮಾಡಿರುವ ಬಗ್ಗೆ ವಿದ್ಯಾರ್ಥಿಯ ವ್ಯಾಸಂಗ ಪ್ರಮಾಣ ಪತ್ರ
    3. Either of parent’s study certificate for minimum of 7 years study in Karnataka.
      ಕರ್ನಾಟಕದಲ್ಲಿ ಕನಿಷ್ಟ 7 ವರ್ಷಗಳ ಅವಧಿಯ ವ್ಯಾಸಂಗ ಮಾಡಿರುವ ಬಗ್ಗೆ ವಿದ್ಯಾರ್ಥಿಯ ಯಾರಾದರೂ ಒಬ್ಬ ಪೋಷಕರ (ತಂದೆ/ತಾಯಿ) ವ್ಯಾಸಂಗ ಪ್ರಮಾಣ ಪತ್ರ
  2. Eligibility Clause H
    1. All the Documents mentioned in serial number 1 to 9 and 12 to 15 for Clause A above.
      ಮೇಲೆ ಅರ್ಹತಾ ಖಂಡ ಎ ಯಲ್ಲಿ ನೀಡಲಾದ ದಾಖಲೆಗಳಲ್ಲಿ ಕ್ರಮ ಸಂಖ್ಯೆ 1 ರಿಂದ 9 ಮತ್ತು 12 ರಿಂದ 15 ರಲ್ಲಿ ತಿಳಿಸಿದ ಎಲ್ಲಾ ದಾಖಲೆಗಳು
    2. Parent’s home town declaration certificate while joining the service issued by the Joint Director / Deputy Director of the concerned district and countersigned by the Director, Department of Sainik Welfare and Resettlement, Bangalore
      ಸೇವೆಗೆ ಸೇರುವಾಗ ಪೋಷಕರ ಮೂಲ ವಾಸಸ್ಥಾನದ ಬಗ್ಗೆ ಘೋಷಣಾ ಪ್ರಮಾಣಪತ್ರವನ್ನು ಸಂಬಂಧಿಸಿದ ಜಿಲ್ಲೆಯ ಸಹ ನಿರ್ದೇಶಕರು/ಉಪ ನಿರ್ದೇಶಕರಿಂದ ಪಡೆದು, ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶಕರಿಂದ ಮೇಲುರುಜು ಪಡೆದುಕೊಳ್ಳುವುದು

If above reservations applicable to you, although there is much time, suggested to get the certificates at the earliest.
ಈ ಮೇಲಿನ ಮೀಸಲಾತಿಗಳು ನಿಮಗೆ ಅನ್ವಯಿಸಿದಲ್ಲಿ ಆದಷ್ಟು ಬೇಗನೆ ಪ್ರಮಾಣ ಪತ್ರಗಳನ್ನು ಹೊಂದಿಸಿಕೊಳ್ಳಲು ಸೂಚಿಸುತ್ತೇನೆ.

ABOUT

Sharath Alva Karinka

Web Designer | SEO Specialist | Consultant
Web Development
90%
Search Engine Optimisation (SEO)
99.5%
Content Writing / Development
80%
Graphic Designing
60%
Consultation Expertise
85%
Digital Marketing
88%