Educational Loan for OBC Students

ಕರ್ನಾಟಕ ಸರಕಾರದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಸಿಇಟಿ, ನೀಟ್ ಹಾಗೂ ಪಿಜಿಸಿಇಟಿ ಪರೀಕ್ಷೆಯ ಮೂಲಕ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಉನ್ನತ ಅಭ್ಯಾಸಕ್ಕೆ ಅನುವಾಗುವಂತೆ ಶೈಕ್ಷಣಿಕ ಸಾಲವನ್ನು ಶೇ.2 ವಾರ್ಷಿಕ ಬಡ್ಡಿದರದಲ್ಲಿ ಒದಗಿಸುತ್ತಿದೆ.

ವಿಶೇಷತೆ:

  1. ಬಡ್ಡಿದರ: ಶೇ.2 /ವಾರ್ಷಿಕ
  2. ಗರಿಷ್ಟ ಸಾಲದ ಮೊತ್ತ: ರೂ.1 ಲಕ್ಷ/ವಾರ್ಷಿಕ

ಅರ್ಹತೆಗಳು:

  1. ವಿದ್ಯಾರ್ಥಿಯು ಕರ್ನಾಟಕದ ಮೂಲನಿವಾಸಿಯಾಗಿರಬೇಕು
  2. ವಿದ್ಯಾರ್ಥಿಯು ಸಿಇಟಿ, ನೀಟ್ ಅಥವಾ ಪಿಜಿಸಿಇಟಿ ಮುಖಾಂತರ ಮಾತ್ರ ಪ್ರಥಮ ವರ್ಷದ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಬೇಕು (ಡಿಪ್ಲೊಮಾ ಲ್ಯಾಟರಲ್ ಎಂಟ್ರಿಯಲ್ಲಿ ಮಾತ್ರ ದ್ವಿತೀಯ ವರ್ಷಕ್ಕೆ). ಮ್ಯಾನೇಜ್ ಮೆಂಟ್/ನೇರ ದಾಖಲಾತಿಗಳಿಗೆ ಅವಕಾಶವಿಲ್ಲ.
  3. ವಿದ್ಯಾರ್ಥಿಯ ಮತ್ತು ಕುಟುಂಬದ ಸದಸ್ಯರ ಒಟ್ಟು ವಾರ್ಷಿಕ ಆದಾಯ ರೂ.3.5 ಲಕ್ಷಕ್ಕಿಂತ ಕಡಿಮೆ ಇರತಕ್ಕದ್ದು.
  4. ತಹಶೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣಪತ್ರ ಕಡ್ಡಾಯವಾಗಿ ಒದಗಿಸತಕ್ಕದ್ದು.
  5. Cat-1, 2A, 3A, 3B ಯಲ್ಲಿ ಬರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು
  6. ಅಲ್ಪಸಂಖ್ಯಾತ ಮತ್ತು ವಿಶ್ವಕರ್ಮ ಮತ್ತು ಅವುಗಳ ಉಪಜಾತಿಗಳನ್ನು ಹೊರತುಪಡಿಸಿ ಎಲ್ಲಾ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು
  7. ವರ್ಷಕ್ಕೆ ಗರಿಷ್ಟ ರೂ.1 ಲಕ್ಷ ಸಾಲವನ್ನು ಪಡೆಯಬಹುದು
  8. ದ್ವಿತೀಯ ವರ್ಷದ ವಿದ್ಯಾರ್ಥಿಗಳು ಈ ಅರ್ಜಿ ಸಲ್ಲಿಸಲು ಅರ್ಹರಲ್ಲ. ನವೀಕರಣ ವಿದ್ಯಾರ್ಥಿಗಳು ಜಿಲ್ಲಾ ಕಲ್ಯಾಣಾಧಿಕಾರಿಗಳನ್ನು ಸಂಪರ್ಕಿಸಬಹುದು.

ಅಗತ್ಯ ದಾಖಲಾತಿಗಳು

ಈ ಕೆಳಗಿನ ದಾಖಲಾತಿಗಳನ್ನು ಅರ್ಜಿ ಸಲ್ಲಿಸುವ ಮುನ್ನ ಕೆಳಗೆ ನೀಡಿರುವ ಫಾರ್ಮ್ಯಾಟ್‍ನಲ್ಲಿ ಸ್ಕ್ಯಾನ್ ಮಾಡಿಟ್ಟುಕೊಳ್ಳಿ

  1. ವಿದಾರ್ಥಿಯ ಫೋಟೋ [JPG/JPEG]
  2. ತಂದೆಯ/ಪೋಷಕರ ಫೋಟೋ [JPG/JPEG]
  3. ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ [PDF]
  4. ವಿದ್ಯಾರ್ಥಿಯ ಆಧಾರ್ ಕಾರ್ಡು [PDF]
  5. ವಿದ್ಯಾರ್ಥಿಯ ಬ್ಯಾಂಕು ಪಾಸು ಪುಸ್ತಕ [PDF]
  6. ಸಿಇಟಿ ಪ್ರವೇಶಪತ್ರ (CET Admit Card) [PDF]
  7. ನೀಟ್ ಪ್ರವೇಶಪತ್ರ (NEET Admit Card) [PDF]
  8. ತಹಶೀಲ್ದಾರರಿಂದ ಪಡೆದ ಜಾತಿ & ಆದಾಯ ಪ್ರಮಾಣಪತ್ರ [PDF]
  9. ವಿದ್ಯಾರ್ಥಿಯ ಸಹಿ [JPG/JPEG]

Last Date for Online Apply [Admission through CET  or NEET]: 24.05.2019

ApplyNowButton

ನೆನಪಿಡಿ: ಕ್ರಸ್ಟ್ ನಿಮ್ಮ ಅರ್ಜಿಯನ್ನು ನಿಗದಿತ ಶುಲ್ಕದೊಂದಿಗೆ ಸಂಸ್ಕರಿಸುತ್ತದೆಯೇ ಹೊರತು ಯಾವುದೇ ಭರವಸೆಯನ್ನು ಒದಗಿಸುವುದಿಲ್ಲ. ಸದ್ರಿ ಸಾಲದ ಬಗೆಗಿನ ಹೆಚ್ಚಿನ ವಿವರಗಳಿಗೆ ಸಂಬಂಧಿಸಿದ ಇಲಾಖೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.