MON - SAT 10.00 am - 06.00 pm
CRUST Website Designers & Web Developers | PutturCRUST Website Designers & Web Developers | PutturCRUST Website Designers & Web Developers | Puttur
09.30 am - 07.00 pm
Main Road, Puttur, D.K. Dist 574201

ವೈಜ್ಞಾನಿಕವಾಗಿ ಪ್ರಪಂಚದ ಸ್ಥಿತಿ-ಗತಿ

corona-virus

ಚೀನಾ ಸೃಷ್ಟಿಸಿದ COVID-19 ಎಂಬ ಅತಿ ಸೂಕ್ಷ್ಮ ವೈರಸ್ ವಿಶ್ವದ ವಿವಿಧ ವಿಜ್ಞಾನಿಗಳು ತಲೆ ಕೆಡಿಸಿಕೊಳ್ಳುವಂತೆ ಮಾಡುವುದರಲ್ಲಿ ಯಶಸ್ಸು ಕಂಡು ಇಂದಿಗೆ ಸುಮಾರು ಹದಿನಾರು ಲಕ್ಷ ಜನರಿಗೆ ಸೋಂಕು ತಗುಲಿಸಿ ಈಗಾಗಲೇ ಅಂದಾಜು ಒಂದು ಲಕ್ಷ ಜೀವಗಳ ನಾಶಕ್ಕೆ ಕಾರಣವಾಗಿ ವೈದ್ಯಕೀಯ ಲೋಕಕ್ಕೇ ಸವಾಲಾಗಿರುವುದು ಮಾತ್ರ ವಾಸ್ತವ ವಿಚಾರ.

ಕೊರೋನಾ ವೈರಸ್ ಜಗತ್ತಿಗೆ ಪ್ರವೇಶ ಮಾಡಿ  ಜೀವ ನಾಶಕ್ಕೆ ತೊಡಗಿ ಹಲವಾರು ತಿಂಗಳುಗಳೇ ಕಳೆದರೂ ಇಂದಿನ ತನಕ ಜಗತ್ತಿನ ಯಾವನೇ ಒಬ್ಬ ವಿಜ್ಞಾನಿಗೂ, ಸಂಶೋಧಕರಿಗೂ ಸೂಕ್ತವಾದ ಔಷಧಿಯಾಗಲೀ ಅಥವಾ ಪರಿಣಾಮಕಾರಿಯಾದ ಚಿಕಿತ್ಸೆಯಾಗಲೀ ಕಂಡುಹಿಡಿಯಲು ಸಾಧ್ಯವಾಗಲೇ ಇಲ್ಲ!

ಅಲ್ಲೊಬ್ಬ ಇಲ್ಲೊಬ್ಬ ಸಂಶೋಧಕರು, ತಾನು ಲಸಿಕೆ ಸಂಶೋಧಿಸುತ್ತಿದ್ದೇನೆ, ತನ್ನ ಸಂಶೋಧನೆ ಪರೀಕ್ಷಾ ಹಂತದಲ್ಲಿ ಇದೆ, ತನ್ನದು ಅಪ್ರೂವಲ್ ಹಂತದಲ್ಲಿ ಇದೆ ಎಂದು ಹೇಳುತ್ತಾ ಪುಕ್ಕಟೆ ಪಬ್ಲಿಸಿಟಿ ಪಡೆದದ್ದು ಬಿಟ್ಟರೆ ಇನ್ನೂ ಸೂಕ್ತ ಚಿಕಿತ್ಸೆ ಕಂಡು ಹಿಡಿಯುವಲ್ಲಿ ಎಲ್ಲರೂ ಫೇಲ್ ಆಗಿರುವುದಂತೂ ನಾವು ವೈಜ್ಞಾನಿಕವಾಗಿ ಎಷ್ಟು ಸಾಧಿಸಿದ್ದೇವೆ ಎಂಬುದನ್ನು ತೋರ್ಪಡಿಸುತ್ತದೆ.

ಇವುಗಳ ಮಧ್ಯೆ ಹಲವಾರು ಆಯುರ್ವೇದ, ನಾಟಿ, ದೈವಿಕ ವೈದ್ಯರು ಫೇಸ್ಬುಕ್, ವಾಟ್ಸಾಪ್ ಖಾಸಗಿ ವಾರ್ತಾ ಮಾಧ್ಯಮಗಳಲ್ಲಿ ಮುಖ್ಯನೆಲೆಗೆ ಬಂದು ವಿವಿಧ ರೀತಿಯ ಚಿಕಿತ್ಸೆ ಗಳನ್ನು ಸೂಚಿದರಾದರೂ ಅದ್ಯಾವುದೂ ಉಪಯೋಗಕ್ಕೆ ಬಾರದ ಉಪ್ಪಿನಕಾಯಿಯಂತಾಗಿದೆ.

ಹೌದು! ಈ ಸತ್ಯವನ್ನು ನಾವು ಒಪ್ಪಿಕೊಳ್ಳಲೇಬೇಕು. ನಾವು ವೈಜ್ಞಾನಿಕವಾಗಿ ತುಂಬಾ ಹಿಂದೆ ಉಳಿದಿದ್ದೇವೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕಕ್ಕೇ ಸಡ್ಡು ಹೊಡೆದು ಹದಿನಾರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೆ ಕಾರಣಕರ್ತವಾಗಿದೆ ಈ ಭಯಂಕರ ಕೊರೋನಾ!

ವೈಜ್ಞಾನಿಕ ಲೋಕದಲ್ಲಿ ವಿಶೇಷ ಮೈಲುಗಲ್ಲನ್ನು ಸಾಧಿಸಿದ್ದ ಮುಂದುವರಿದ ದೇಶವಾಗಿರುವ ಅಮೆರಿಕವೇ ಕೊರೋನಾ ಮಹಾಮಾರಿಯಿಂದ ತನ್ನ ಪ್ರಜೆಗಳನ್ನು ಉಳಿಸಲು 30-40 ವರ್ಷಗಳಿಂದ (ಇನ್ನೂ 30-40 ವರ್ಷಗಳ ಕಾಲ?) ಮುಂದುವರಿಯುತ್ತಿರುವ ದೇಶವಾಗಿರುವ ಭಾರತದಿಂದ ಔಷಧಿಯನ್ನು ಆಮದು ಮಾಡಿಕೊಂಡು ನಾವು ವೈಜ್ಞಾನಿಕವಾಗಿ ಟೊಳ್ಳು ಎಂಬ ಸತ್ಯವನ್ನು ಒಪ್ಪಿಕೊಂಡಿರುವುದು ಈಗ ಇತಿಹಾಸ.

ಕೊರೋನಾ ವೈರಸ್ ಸೃಷ್ಟಿಕರ್ತ ದೇಶದ ವರದಿಗಳನ್ನು ಯಥಾವತ್ತಾಗಿ ಯಾವುದೇ ತರ್ಕವಿಲ್ಲದೇ ವಿಶ್ವಕ್ಕೆ ಒಪ್ಪಿಸುತ್ತಿದ್ದ ವಿಶ್ವ ಆರೋಗ್ಯ ಸಂಸ್ಥೆಯ (WHO) ನೈಜವಾದ ಅವಶ್ಯಕತೆಯ ಬಗ್ಗೆ ಈಗಾಗಲೇ #ಅಮೆರಿಕ ಸ್ಪಷ್ಟ ಮಾತುಗಳಲ್ಲಿ ಪ್ರಶ್ನೆ ಎತ್ತಿ ಇತರ ದೇಶಗಳಿಗೂ ಆಲೋಚನೆ ಮಾಡುವಂತೆ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಎಲ್ಲಾ ಪ್ರಮುಖ ಚಟುವಟಿಕೆಗಳಲ್ಲಿ ಚೀನಾದ ಅನುಚಿತ ಪ್ರಭಾವವನ್ನು ಬಳಸಿ ತಾನು ಸೂಪರ್ ಪವರ್ ದೇಶವಾಗಲು ಹೊರಟಿರುವ ಚೀನಾದ ಮುಖವಾಡವನ್ನು ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಿಚ್ಚಿಟ್ಟಿರುವುದು ಈಗ ಹಳೆಯ ಸುದ್ದಿ.

ಏತನ್ಮಧ್ಯೆ ಸಾವಿನ ಏಜೆಂಟನ್ನು ಪ್ರಪಂಚದ ಎಲ್ಲಾ ಮೂಲೆ ಮೂಲೆಗೆ ಕಳುಹಿಸಿ, ಮರಣ ಮೃದಂಗ ಬಾರಿಸುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ತಾನು ಮಾತ್ರ ಅದಕ್ಕೆ ಅವಶ್ಯಕ ಇರುವ ವೈದ್ಯಕೀಯ ಸಲಕರಣೆಗಳನ್ನು ಸಮರೋಪಾದಿಯಲ್ಲಿ ಉತ್ಪಾದಿಸಿ ಆರ್ಥಿಕ ಲಾಭವನ್ನು ಪಡೆಯುತ್ತಿರುವ ಚೀನಾದ ನಡೆಯ ಬಗ್ಗೆ ಇನ್ನೂ ಹಲವಾರು ದೇಶಗಳು ತಲೆಕೆಡಿಸಿಕೊಂಡತಿಲ್ಲ.

ಹಲವಾರು ದೇಶಗಳಲ್ಲಿ ಎಲ್ಲಾ ಆರ್ಥಿಕ ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಲಾಕ್ ಡೌನ್ ಮಾಡಿ, ಜನರ ಆರೋಗ್ಯ ಕಾಪಾಡಲು ಪಡುತ್ತಿರುವ ಹರಸಾಹಸ ವರ್ಣಿಸಲಸಾಧ್ಯ! ಒಂದು ಅರ್ಥದಲ್ಲಿ ಪೂರ್ತಿ ಜಗತ್ತನ್ನೇ ಸಾವಿನ ಭಯದಿಂದ ನಲುಗಿಸಿದ ಕೊರೋನಾ ವೈರಸ್ ವೈದ್ಯಕೀಯ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಸಾಧಿಸಲು ಇನ್ನೂ ವಿಪುಲ ಅವಕಾಶವನ್ನು ತೋರಿಸಿಕೊಟ್ಟಿರುವುದಂತೂ ಕಟು ಸತ್ಯ..

ವೈದ್ಯಕೀಯ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಅಭ್ಯಾಸ ಮಾಡಲು ಇಚ್ಚಿಸುವ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ವೃತ್ತಿಪರರು ಇನ್ನು ಯಾವುದೇ ಗೊಂದಲ ಇಲ್ಲದೇ ಹಲವು ಸಾಧನೆಗಳನ್ನು ಮಾಡಬಹುದು. ವಿಜ್ಞಾನದ ಹಲವು ಮಹತ್ತರ ಘಟ್ಟಗಳನ್ನು ನಾವು ಇನ್ನಷ್ಟೇ ಸಾಧಿಸಬೇಕಿದೆ. ಪೂರ್ಣ ಪ್ರಪಂಚವನ್ನೇ ಸ್ಥಬದವಾಗಿಸಿದ ಕೊರೋನಾ ವೈರಸ್ ಮುಂದೆ ನಾವು ಕಲಿತದ್ದು ಹಾಗೂ ಸಾಧಿಸಿರುವುದು ಎಳ್ಳಷ್ಟೂ ಇಲ್ಲ ಅನ್ನಿಸಿದರೆ ಆಶ್ಚರ್ಯವೇನಿಲ್ಲ.

ವಿಶ್ವವೇ ಈಗ ಕಾತುರತೆಯಿಂದ ಎದುರು ನೋಡುತ್ತಿರುವುದು ಸುಲಭ ಮತ್ತು ಯಶಸ್ವಿ ಔಷಧಿಯನ್ನು ಬಿಟ್ಟು ಬೇರೇನೂ ಅಲ್ಲ. ಜಗತ್ತಿನ ಅತಿ ಪ್ರಭಾವೀ ವ್ಯಕ್ತಿಗಳು, ವಿಜ್ಞಾನಿಗಳು, ಸಂಸ್ಥೆಗಳು, ದೇಶಗಳೇ ಸೋತು ಕೈ ಮೇಲೆತ್ತಿ ನಿಂತಿರುವ ಈ ಸಂದರ್ಭದಲ್ಲಿ, ಅದನ್ನು ಸಾಧಿಸಿದವರು ಮಾತ್ರ ಪ್ರಪಂಚದ ಎಲ್ಲಾ ದೇಶಗಳ ಜನರ ಹೀರೊ ಆಗುವುದರಲ್ಲಿ ನಿಸ್ಸಂದೇಹ.


✍️  ಶರತ್ ಆಳ್ವ ಕರಿಂಕ
ಕ್ರಸ್ಟ್ | ಪುತ್ತೂರು