ವೈಜ್ಞಾನಿಕವಾಗಿ ಪ್ರಪಂಚದ ಸ್ಥಿತಿ-ಗತಿ
ಚೀನಾ ಸೃಷ್ಟಿಸಿದ COVID-19 ಎಂಬ ಅತಿ ಸೂಕ್ಷ್ಮ ವೈರಸ್ ವಿಶ್ವದ ವಿವಿಧ ವಿಜ್ಞಾನಿಗಳು ತಲೆ ಕೆಡಿಸಿಕೊಳ್ಳುವಂತೆ ಮಾಡುವುದರಲ್ಲಿ ಯಶಸ್ಸು ಕಂಡು ಇಂದಿಗೆ ಸುಮಾರು ಹದಿನಾರು ಲಕ್ಷ ಜನರಿಗೆ ಸೋಂಕು ತಗುಲಿಸಿ ಈಗಾಗಲೇ ಅಂದಾಜು ಒಂದು ಲಕ್ಷ ಜೀವಗಳ ನಾಶಕ್ಕೆ ಕಾರಣವಾಗಿ ವೈದ್ಯಕೀಯ ಲೋಕಕ್ಕೇ ಸವಾಲಾಗಿರುವುದು ಮಾತ್ರ ವಾಸ್ತವ ವಿಚಾರ. ಕೊರೋನಾ ವೈರಸ್ ಜಗತ್ತಿಗೆ ಪ್ರವೇಶ ಮಾಡಿ ಜೀವ ನಾಶಕ್ಕೆ ತೊಡಗಿ ಹಲವಾರು ತಿಂಗಳುಗಳೇ ಕಳೆದರೂ ಇಂದಿನ ತನಕ ಜಗತ್ತಿನ ಯಾವನೇ…